ಕಾಲ್ಪನಿಕ ಕಥಾ ಹಂದರದಲ್ಲಿ ಮೂಡೋ ಎಷ್ಟೋ ಪಾತ್ರಗಳಲ್ಲಿ, ಸಂಧರ್ಭಗಳಲ್ಲಿ, ನೆನಪುಗಳ ಸರಮಾಲೆಯಲ್ಲಿ, ಕಣ್ಣಂಚಿನ ಆಸೆಗಳಲ್ಲಿ, ಹೃದಯದ ಪ್ರತಿ ಬಡಿತದಲ್ಲಿ, ನಡೆವ ನೂರು ದಾರಿಗಳಲ್ಲಿ, ಕರಗೋ ಸಹಸ್ರ ಕ್ಷಣಗಳಲ್ಲಿ, ಮನಸ್ಸಿನ ಅರಿವಿಲ್ಲದಂತೆ, ಮನಸ್ಸಿನ ಮನೆಗೆ, ಮನದ ಅಂಗಳದಲ್ಲಿ ಮೂಡೋ ಅನಿಮಿಯಿತಾ ಬಣ್ಣಗಳನ್ನು ಬಳೆದು, ಈ ಅಷ್ಟು ಆಸೆಗಳನ್ನು ಪೂರೈಸುವಂತಹ ಜೀವಕ್ಕೆ ಹಾತೊರೆದು ತೆರೆದ ಬಾಗಿಲ ಬಳಿ ಕಾದು ಕೂತಿರುತ್ತೇವೆ.
ಆ ಆಸೆಗಳಿಗೆ, ನೆನಪುಗಳಿಗೆ, ಕರಗಿಹೋದ ಭಾವನೆಗಳಿಗೆ ಒಂದು ಮೂರ್ತಿ ರೂಪ ಕೊಟ್ಟು ಆ ಬಣ್ಣದ ಮನೆಯಲ್ಲಿ ಕೂಡಿಸಿ ಅಕ್ಷತೆ ಹಾಕುವ ಬಯಕೆ. ನಿಜ ಜೀವನದ ಅಂಗವಲ್ಲದಿದ್ದರು, ಕಲಾವಿದನ ಕಲ್ಪನೆಗೆ ಎಟುಕದ ಮುಗಿಲು ಇಲ್ಲವೇ ಇಲ್ಲ ಅನ್ನೋ ಸ್ಫೂರ್ತಿಯೇ ಈ ಬರಹದ ತಳಹದಿ.
ನಾವೆಲ್ಲರೂ ಬಾಳಿನ ವಿವಿಧ ಹಂತಗಳನ್ನು, ವಿವಿಧ ರೀತಿಯಲ್ಲಿ, ಬಗೆ ಬಗೆಯ ಅನುಭವಗಳಿಗೆ ಮೈಯೊಡ್ಡಿ, ಸಿಹಿ-ಕಹಿ, ನೋವು-ನಲಿವು, ಆಸೆ-ಆಕಾಂಕ್ಷೆಗಳನ್ನು, ನಮ್ಮದೇ ಶೈಲಿಯಲ್ಲಿ ಗಳಿಸಿ, ಸಿಗದೇ ಇದ್ದಾಗ ಇಲ್ಲದ ಮನಸಲ್ಲಿ ಬೀಳ್ಕೊಟ್ಟು, ಆ ನೆನಪಿನ ದಾರಿಯಲ್ಲಿ ಒಂದು ಗೂಡು ಕಟ್ಟಿ ಬಂದಿರುತ್ತೇವೆ.
ಆ ಎಲ್ಲ ಹಂತಗಳಲ್ಲಿ ತುಂಬಾ ಕ್ರಿಯಾತ್ಮಕವಾದ ೧೮-೨೬ ರ ವಯಸ್ಸೇ ನಮ್ಮನ್ನು ಕಡೆವರೆಗೂ ಎಡಬಿಡದೆ ಕಾಡೋ ನೆನಪುಗಳ, ಆಸೆಗಳ, ಭಾವನೆಗಳ ಒಡೆಯ. ಈ ವಯಸ್ಸು ಎಂತಹದೆಂದರೆ, ವಾಸ್ತವಿಕ ಪ್ರಪಂಚಕ್ಕೆ ರೆಕ್ಕೆ ಪುಕ್ಕ ಕೊಟ್ಟು, ಅರಿಯದ ಆಗಸದ ಉತ್ತುಂಗಕ್ಕೆ ಕರೆದೊಯ್ದು ಬಿಡುತ್ತದೆ.
ಇಂತಹ ಹಲವಾರು ಹಾರಾಟಗಳಲ್ಲಿ ಮೂಡಿದ ಒಂದು ಮೂರ್ತಿಯ ಬಗ್ಗೆ ಬರೆಯುವ ಬಯಕೆ. ತಾರುಣ್ಯದಲ್ಲಿ ಬರುವ ಯೋಚನೆಗಳಿಗೆ ವ್ಯವಿಧ್ಯತೆಯ ಕೊರತೆ ಇಲ್ಲದಿದ್ದರೂ, ಪ್ರಮುಖವಾಗಿ, ಒಂದು ಬಾಲೆಯ ನೆನಪು ತುಳುಕು ಹಾಕಿರುತ್ತೆ.
ಎಲ್ಲರು ಸಹ ತಮ್ಮದೇ ರೀತಿಯಲ್ಲಿ ಒಂದು ಹುಡುಗಿಯ ಬಗ್ಗೆ ಆದರದ, ಪ್ರೀತಿಯ, ಅಭಿಮಾನದ ಒಲವು ಬಚ್ಚಿಟ್ಟಿರುತ್ತಾರೆ. ಸಹಜವಾಗಿಯೇ ವಯಸ್ಸಿನ ಬಯಕೆಯೋ, ಪ್ರಕೃತಿಯ ಇಚ್ಛೆಯೋ ನಾನು ಕೂಡ ಒಂದು ಹುಡುಗಿಯ ಹಾವ-ಭಾವ, ನಡಿಗೆ, ನಗು, ಮಾತು, ಅಚ್ಚರಿಯ ಭಾವ, ಸಂಕೋಚದ ಸಲಿಗೆ, ವಾರೆ ನೋಟ, ತುಟಿಯಂಚಿನ ನಗೆ, ಕಾಡಿಗೆ, ಬೊಂಬೆಯಂತಹ ಮೊಗಕೆ ಮಾಡಿದ ಸಿಂಗಾರ, ವಾರ್ಷಿಕೋತ್ಸವಕ್ಕೆ ಉಟ್ಟ ಸೀರೆ, ಘಮ ಘಮಿಸುವ ಮಲ್ಲಿಗೆ ಹೂವು, ಕೆನ್ನೆ ಗುಳಿ ಬಳಿ ಸರಿದಾಡೋ ರೇಷ್ಮೆಯಂತಹ ಕೂದಲು, ಎಲ್ಲವು ಸೇರಿ ಮನಸ್ಸಿನ ತುಂಬೆಲ್ಲ ಭಾವನೆಗಳ ಉನ್ಮಾದಕ್ಕೆ ಭದ್ರವಾದ ಅಡಿಪಾಯ ಹಾಕಲು ಬಿಟ್ಟಿದ್ದೆ.
ಬಾಳ ಹಡಗಿನ ದಾರಿ ಸಮುದ್ರದ ಅಲೆಗಳಿಗೋ, ಅಥವಾ ಬೀಸುವ ಗಾಳಿಗೆ ತಲೆಬಾಗೋ, ದಾರಿ ಬದಲಿಸಿದಾಗ, ನಗು ನಗುತ್ತಲೇ ಸಾಗಿ ಬಿಡುತ್ತೇವೆ. ಆ ವಯಸ್ಸಿನ ಅಭಿಮಾನ ಒಲವೇ ಅಂತದ್ದು. ಮನಸ್ಸಲ್ಲಿ ತಮ್ಮದೇ ಛಾಪು ಮೂಡಿಸಿದವರ ಬಗ್ಗೆ ಆದರದ ಭಾವ ಒಳ್ಳೇದನ್ನೇ ಬಯಸುತ್ತ ಮುಂದೆ ಸಾಗುತ್ತದೆ.
ಈ ರೀತಿ, ಕಲ್ಪನೆಯ ಕದ ತಟ್ಟಿದ ಬೆಡಗಿ, ನಾ ಚಾಹ ಕುಡಿಯಲು ಕೂತಿದ್ದ ಮೇಜಿನ ಕೂಗಳತೆ ದೂರದಲ್ಲಿ ಕಂಡರೆ, ಆಗುವ ತಳಮಳ , ಮಾತಾಡಿಸಬಹುದು ಅನ್ನೋ ಖುಷಿ, ಗುರುತು ಹಿಡಿಯಲ್ವೇನೋ ಅನ್ನೋ ಅಳುಕು, ಬರಿ ಹೈ ಅಲ್ಲೇ ಸಂಭಾಷಣೆ ಮುಗಿದು ಹೋದರೆ ಹೇಗೆ ಅನ್ನೋ ಪ್ರಶ್ನೆಗಳ ಹೂಗುಚ್ಛದೊಂದಿಗೆ ಮಾತಾಡಲು ಮುಂದಾದೆ.
ಸರಿಯಾಗಿ ಒಬ್ಬರನ್ನು ಒಬ್ಬರು ನೋಡದೆ ಸುಮಾರು ೩-೪ ವರ್ಷಗಳಾಗಿರಬಹುದು, ಆದರೂ ಇಂದಿಗೂ ನಮ್ಮ ಹುಡುಗರ ಮನ ಕೆಡಸಿದೆ ಅಂದಕ್ಕೆ ಕೊರತೆ ಕಾಣಲಿಲ್ಲ. ಜೊತೆ ಓದಿದವರು ಆಡುವ ಉಭಯಖುಶಲೋಪರಿ ಮಾತಾಡುತ್ತ, ಶಾಲಾ ಕಾಲೇಜಿನ ಸ್ಮರನೀಯ ಕ್ಷಣಗಳನ್ನು ನೆನೆಯುತ್ತ, ಒಂದು ಸುತ್ತು ನಾಲ್ಕು ವರ್ಷದ ಇಂಜಿನಿಯರಿಂಗ್ ಹಾದಿಯಲ್ಲಿ ಸಾಗಿ ಬರುವಷ್ಟರಲ್ಲಿ, ನಾಲ್ಕು ಸಮೋಸ, ೨ ಕಪ್ ಚಹಾ ಆಗೋಗಿದ್ದೆ ಗೊತ್ತಾಗಿಲ್ಲ.
ಮಾತು ದುಪ್ಪಟ್ಟಾದರು, ಅಳುಕು ಅಂಜಿಕೆ ಇಲ್ಲದ ವ್ಯಕ್ತಿತ್ವ ಅನ್ನೋದು ಕಾಲೇಜು ಮೆಟ್ಟಿಲತ್ತಿದಾಗಲೇ ಗೊತ್ತಾಗಿತ್ತು. ಗುರಿ ಮುಟ್ಟುವತನಕ ಗಮನ ಸಡಿಲಿಸದ ಸ್ಥಿರತೆ. ಮಾತುಗಳ ಪ್ರೌಢತೆ, ವಿಷಯಗಳ ಬಗೆಗಿನ ಜ್ಞಾನ, ಜೀವನದ ಸರಿ ತಪ್ಪುಗಳನ್ನೂ ಬೊಟ್ಟು ಮಾಡಿ ತೋರುಸಿತ್ತಿದಾಗ ಆಕೆ ಬಗೆಗಿನ ಅಭಿಮಾನ ಇಮ್ಮಡಿಯಾದಂತೆ ಭಾಸವಾಯಿತು. ಅಂದದ ಮೊಗಕೆ, ಚಂದದ ಮನಸ್ಸು ಎಂಬ ಭಾವವು ಮೂಡಿತ್ತು. ಕೆಲಸದ ಒತ್ತಡ, ವೀಸಾ ಬರದೇ ಇರೋ irritation , ಎರಡಂಕಿ ದಾಟದ salary hike , ಎಲ್ಲವು ಸಹ ಆಕೆಯ ಮಾತಿನ ಸೊಗಸಿನ ಮುಂದೆ ಸೋತು ಸುಣ್ಣವಾಗಿದ್ದವು.
ಮತ್ತೆ ಸಿಗೋಣ್ವಾ ಮೊಬೈಲ್ number ಕೇಳ್ಬೇಕು ಅನ್ನೋ ಅಷ್ಟ್ರಲ್ಲಿ, ಆಕೆಯ fiance ಬಂದು ಕೈ ಕುಲಿಕಿದಾಗ ಚಿಗುರೊಡೆಯುತ್ತಿದ್ದ ಆಸೆ ಗೋಪುರ ಮೆಲ್ಲನೆ ತತ್ತರಿಸಿತು. ಕಷ್ಟದ ಮುಗುಳ್ನಗೆಯೊಂದಿಗೆ ಇಬ್ಬರನ್ನು ಬೀಳ್ಕೊಟ್ಟು, ನೆನಪಿನ ಹಾದಿಯಲ್ಲಿ ನೆಡೆದು ಬಂದೆ.
ಆ ಒಲವು, ಆದರ, ಅಭಿಮಾನ, ಮೆಲ್ಲನೆ ಒಳ್ಳೆ ಸ್ನೇಹಕ್ಕೆ ತಿರುಗಿ ಒಂದು ಅವಿನಾಭಾವ ಸಂಭಂದವಾಗಿ ಬೆಳೆದು, ಆಗಾಗ ಆಸರೆಯಾಗೋ ಗೆಳೆತಿಯಾಗಿ ಉಳಿದು ಬಿಡುವಂತಾದರೆ ಸಾಕು ಅನ್ನೋ ಭಾವವಿದ್ದರೂ, ಬಾಳಿನ ಹೊಸ ಅಧ್ಯಾಯ ಶುರು ಮಾಡುತ್ತಿರೋ ಹುಡುಗಿಗೆ ಮೆಲ್ಲನೆ ಮನ್ಸಲ್ಲೇ ಹಾರೈಸಿ ನಡೆದು ಬಂದೆ.

You are awesome Nithin :) keep writing !
ReplyDeleteThank You Seemakka :)
Delete