ಸರ ಸರನೆ ಓಡಿಬಂದು, ಹತ್ತಿದ್ದ ಸಿಟಿ ಬಸ್ಸಲ್ಲಿ ಕೂತು, ಕಿವಿಗೆ ಸಣ್ಣನೆ ಕಿವಿಯಡಕ ಸಿಕ್ಕಿಸಿ, ನನ್ನದೇ ಲೋಕಕ್ಕೆ ಹೊಯ್ಯುವ ಹಾಡು ಕೇಳ ಕೂತೆ. ನಾನು ಯಾವಾಗಲೂ ಹಾಗೆ, ಓಡುವ ಬಸ್ಸಲ್ಲಿ ಕೂತು, ಹಾಡು ಕೇಳುತ್ತ, ಮರಗಳನ್ನು ಎಣಿಸುತ್ತ, ಗಾಳಿಯ ರಭಸಕ್ಕೆ ಮುಖಕೊಟ್ಟು, ನನ್ನದೇ ನೆನಪಿನ ಅಲೆಯಲ್ಲಿ, ಮನಸ್ಸನ್ನು ನನ್ನ ದೋಣಿಯ ನಾವಿಕನ ಮಾಡಿ, ಯಾರು ಮುಟ್ಟಿರದ ದ್ವೀಪವ ಮುಟ್ಟುವ ತವಕ.
ಹೀಗೆ ಪ್ರತಿದಿನವೂ ನಡೆಸುವ ಪಯಣದಲ್ಲಿ, ಮೂಡೋ ನೆನಪಿನ ಸರಮಾಲೆ ಇದೆಯಲ್ಲ, ಅದರಲ್ಲಿ ಸಿಗುವ ಖುಷಿಗೊ ಏನೋ, ಬಸ್ಸಿಗೂ ನನಿಗೂ ಒಂದು ಅವಿನಾಭಾವ ಸಂಭಂದ. ಒಂದೊಮ್ಮೆ ಪರಮಾತ್ಮನ ಭೇಟಿ ಯಾದರೆ, ನಾ ಕೇಳೋ ವರಗಳಲ್ಲಿ, ನಂಗೆ ಆಸೆ ಆದ ಕೂಡಲೇ ನಿಲ್ಲದೆ ಸಾಗೋ ಬಸ್ಸಲ್ಲಿ ಹತ್ತಿಸಿ, ಕರಗದ ಮುದ್ದಾದ ಹಾಡುಗಳ ಸರಮಾಲೆ ಹಿನ್ನಲೆಯಲ್ಲಿ ಮೂಡಲಿ ಅನ್ನುವ ವರ, ಮೊದಲ ಹತ್ತರಲ್ಲಿ ಇರುವುದಂತೂ ಖಚಿತ.
ಮಂಗಳೂರಿನಲ್ಲಿದ್ದಾಗ ನಡೆಯುತ್ತಿದ್ದ ಈ ಮೇಲಿನ ದಿನಚರಿಯಲ್ಲಿ, ಮೂಡಿದ ಒಂದು ನೆನಪಿನ ಪಯಣದ ಬಗ್ಗೆ ಬರೆಯೋ ಒಂದು ಸಣ್ಣ ಪ್ರಯತ್ನ.
ಅಂದು ಶುಕ್ರವಾರ, ಐಟಿಯಲ್ಲಿ ಕೆಲಸ ಮಾಡುವರಿಗೆಲ್ಲ ಅದೊಂತರ ಹಬ್ಬದ ದಿನ. ನಂಗೆ ಶುಕ್ರವಾರ ಅಂದಾಕ್ಷಣ ಅಂತಹದ್ದೇನು ಆಹ್ಲಾದಕರ ಒಲವಿಲ್ಲದಿದ್ದರು, ನನ್ನ ವೃತ್ತಿಪರ ಜೀವನದಲ್ಲಿ ಒಂದು ವಾರ ಮುಗಿಸಿದ ಧನ್ಯತಾ ಭಾವವಂತೂ ಇದ್ದೇಇತ್ತು. ಹೀಗೆ ನನ್ನ ಮೇಲಿನ ದಿನಚರಿಯಂತೆ ಬಸ್ಸನ್ನು ಹತ್ತಿ, ಕಿವಿಯಡಕ ಸಿಕ್ಕಿಸಿ ಹಾಡು ಕೇಳೋ ಹೊತ್ತಿಗೆ, ಕಣ್ಣು ಅಲ್ಲೇ ಎದುರಿಗೆ ಕೂತಿದ್ದ ಒಂದು ಪುಟ್ಟ ಸಂಸಾರದ ಕಡೆಗೆ ಬಿತ್ತು.
ಅಪ್ಪ, ಅಮ್ಮ, ಅಣ್ಣ ಮತ್ತು ಒಂದು ಮುದ್ದಾದ ತಂಗಿ ಇದ್ದಂತಹ ಸಂಸಾರ ಅದು. ನೋಡಲು ಮಾಧ್ಯಮ ವರ್ಗದ ಸಂಸಾರ ಎನ್ನುವಂತಿತ್ತು. ಅಣ್ಣ-ತಂಗಿ ಇಬ್ಬರು ಅವರ ತಂದೆ ತಾಯಿಯ ಮುಂದೆ ಕೂತಿದ್ದರು. ತಂದೆ ತಾಯಿಗೆ ಸದಾ ತಮ್ಮ ಮಕ್ಕಳ ಮೇಲೇ ಕಣ್ಣು. ಆ ನೋಟದಲ್ಲಿ ಮಕ್ಕಳ ಮೇಲಿನ ಪ್ರೀತಿಯೊಟ್ಟಿಗೆ, ತಮ್ಮ ಮುಂದಿನ ಜೀವನದ ಕನಸ್ಸು ಕೂಡ ಸಾಗಿತ್ತು.
ಆ ಸಂಸಾರವ ನೋಡಿದ ಕ್ಷಣವೇ ನನ್ನ ಮನಸ್ಸು ನನ್ನ ಬಾಲ್ಯದ ಕಡೆ ಮುಖ ಮಾಡಿ ನಿಂತಿತ್ತು. ಹುಟ್ಟಿದ್ದು ಸ್ವಲ್ಪ ಅನುಕೂಲಸ್ಥ ಸಮಯದಲ್ಲಾದರೂ, ನನಗೆ ತಪ್ಪು-ಒಪ್ಪಿನ ಅರಿವು ಮೂಡುವ ಒಳಗೆ, ನನ್ನ ತಂದೆ-ತಾಯಿಯ ಕಷ್ಟಗಳು ಸಾಲಾಗಿ ನಿಂತಿದ್ದವು. ವರುಷಗಳು ಕಳೆದವಾದರೂ ಕಷ್ಟಗಳು ಕರಗಲಿಲ್ಲ. ಸಂಬಂಧಿಗಳ ವಿರೋಧ, ಕುಹಕದ ನಡುವೆಯೂ ಕೂಡ ನನ್ನನು ಊರಲ್ಲಿದ್ದ ಪ್ರತಿಷ್ಠಿತ ಶಾಲೆಗೇ ಸೇರಿಸಿದ್ದರು. ಇನ್ನು ನನ್ನ ತಂಗಿ ಬರುವ ಒಳಗೆ, ನಮ್ಮ ಮನೆಯ ವಿಸ್ತಾರವು ಕಡಿಮೆಯಾಗಿತ್ತು. ತಂಗಿಯನ್ನು ಕೂಡ ಅದೇ ಶಾಲೆಗೇ ಸೇರಿಸಿದ್ದರು. ಪೋಷಕರಿಗೆ ಹಣದ ಕೊರತೆಯಿತ್ತಾದರೂ ಬದುಕಿಗೆ ನಮ್ಮ ಮೂಲಕ ಹೊಸ ಆಯಾಮ ಕೊಡಬೇಕೆಂಬುವ ಆಸೆಗೇನು ಕೊರತೆ ಇರಲಿಲ್ಲ. ಪ್ರತಿವರುಷವು ಪರೀಕ್ಷೆಯ ಹಾಲ್ ಟಿಕೆಟ್ ಅನ್ನು ಪಡೆಯುತ್ತಿದ್ದ ಕೊನೆ ವಿದ್ಯಾರ್ಥಿಗಳು ನಾವೇ. ಮೊದಲ ವರುಷ ಸ್ವಲ್ಪ ಮುಜುಗರ ಅನ್ನಿಸಿತ್ತಾದರೂ, ನಮ್ಮ ಪೋಷಕರು ಮಾಡುತ್ತಿದ್ದ ಹೋರಾಟದ ಮುಂದೆ ಈ ಮುಜುಗರ ಇಬ್ಬರಿಗೂ ಹೆಚ್ಚನಿಸಲಿಲ್ಲ. ಪೋಷಕರ ಹೋರಾಟ, ಸಂಬಂಧಿಗಳ ವಿರೋಧ-ಕುಹಕ, ಗೆಲ್ಲಬೇಕಂಬ ಆಸೆ, ನಮ್ಮನ್ನು ಜರಿದವರ ಮುಂದೆ ಎದೆಯುಬ್ಬಿಸಿ ನಡೆಯಬೇಕೆಂಬ ಕನಸು, ಎಲ್ಲವು ಸೇರಿ ನಮ್ಮಲ್ಲಿ, ನಮಗೆ ಅರಿವಿಲ್ಲದಂತೆ ಬದುಕುವ ಪಾಠ ತಿಳಿಸಿತ್ತು.
ನಾ ಓದಿದ ಶಾಲೆ, ಪೋಷಕರ ಹೋರಾಟ, ಅಪ್ಪನ ಅಂಗಡಿ, ಕೇಳಿದ್ದು ಸಿಗದ್ದಿದ್ದಾಗ ಮೂಡಿದ್ದ ಸಿಟ್ಟು, ಕತ್ತಲಾದರೂ ನಿಲ್ಲದ ಕ್ರಿಕೆಟ್ ಮ್ಯಾಚುಗಳು, ವಯಸ್ಸು ಇಪ್ಪತ್ತಾದರೂ ಸಿಗುತ್ತಿದ್ದ ಬರಿ ಹತ್ತು ರೂಪಾಯಿ, ಇಂಜಿನೀಯೆರಿಂಗ್ ಮಾಡುತ್ತಿದ್ದರು ನನ್ನ ಕೈಬಿಡದ ನನ್ನ ಸೈಕಲ್, ಸಮಯದ ಪರಿವೆ ಇಲ್ಲದೆ ಹರಟಲು ಸಿಗುತ್ತಿದ್ದ ಗೆಳೆಯರ ಬಳಗ, ಸಣ್ಣಗೆ ಮೂಡಿ ಕರಗೋಗಿದ್ದ ಒಂದು ಕ್ರಶ್, ಪದವಿ ಕಾಲೇಜಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಆದ ಘಳಿಗೆ, ಕ್ಯಾಂಪಸ್ ಸೆಲೆಕ್ಷನ್ ಆಗಿದ್ದಾಗ ನನ್ನ ಕಂಡು ನನ್ನ ಅಮ್ಮನಲ್ಲಿ ಮೂಡಿದ್ದ ಸಾರ್ಥಕತೆಯ ಭಾವ,ಅಪ್ಪನಿಗೆ ತನ್ನ ಮಗನ ಮೇಲಿದ್ದ ಹೆಮ್ಮೆಯ ಬಗ್ಗೆ ಅಮ್ಮನಿಂದ ತಿಳಿದಾಗ ಆಗುತ್ತಿದ್ದ ಸಂತಸ, ಎಲ್ಲವು ಒಮ್ಮೆಲೇ ಕಣ್ಣು ಮುಂದೆ ಬಂದು ನಿಂತಂತಾಯಿತು.
ಈ ಅಷ್ಟು ವಿಷಯಗಳ ನಡುವೆ, ಮುಖ್ಯವಾದ ಒಂದಂಶವೆಂದರೆ ನನ್ನ ತಂದೆ-ತಾಯಿ. ಅವರು, ನಾನು ತಪ್ಪು ಮಾಡಿದ್ದಾಗ ತಿದ್ದಿದ್ದಾರೋ ಹೊರತು, ನನ್ನ ಯೋಚನಾ ಶಕ್ತಿಗೆ, ನನ್ನದೇ ರೂಪ ಕೊಡುವ ಸ್ವಾತಂತ್ರಕೊಟ್ಟಿದ್ದರು. ಕಷ್ಟ-ಕಾರ್ಪಣ್ಯಗಳ ನಡುವೆ ಬದುಕಿನ ಸಂತಸಗಳ ಅನುಭವಿಸೋ ಕಲೆ ಧಾರೆಯೆರೆದಿದ್ದರು. ಸೋತಾಗ ಕುಗ್ಗದೆ ಮುನ್ನಡೆಯಲು ಕಲಿಸಿದ್ದರು.
ಒಂದು ಮಗು, ಬೆಳೆದು ದೊಡ್ಡವನಾಗಿ , ತನ್ನ ಕಾಲ ಮೇಲೆ ತಾನು ನಿಲ್ಲುವವರಿಗೆ, ತಂದೆ-ತಾಯಿ ಮಾಡುವ ಹೋರಾಟ, ತ್ಯಾಗಕ್ಕೆಲ್ಲ ಬೆಲೆ ಕಟ್ಟಲು ಸಾಧ್ಯವೇ ಅನ್ನೋ ಸಣ್ಣ ಭಾವ ಮೂಡಿತ್ತು. ಆ ಭಾವದೊಂದಿಗೆ ಕಣ್ಣಾಡಿಸಿದಾಗ ಎದುರಿಗಿದ್ದಿದ್ದು ನನ್ನ ಮನೆಯ ದಾರಿ.ಆ ಭಾವದ ಬೆಳಕಲ್ಲಿ ಮನೆಯ ದಾರಿ ಹಿಡಿದು ನಡದೇ ಬಿಟ್ಟೆ.

ನೆನಪಿನ ದಾರಿಯಲ್ಲಿ ಮತ್ತೊಂದು ನೆನಪಿನೊಂದಿಗೆ ಮತ್ತೆ ಸಿಗೋಣ!
SUperb :)
ReplyDeleteThank You Seemakka :-)
ReplyDeleteಸಣ್ಣ ಪಯಣದ ಪುಟ್ಟ ನೆನಪು ಸ್ಮರಣೀಯ👍👍
ReplyDeleteನೀವು ಯಾರು ಅಂತ ಗೊತ್ತಾಗಲಿಲ್ಲ, ಆದರೂ ಧನ್ಯವಾದಗಳು! :)
Delete